Blog

ಟೀಚರ್ಸ ಕಾಲೋನಿ ವೆಲ್ಫೆರ ಅಸೋಸಿಯೇಶನ್ ನಿಂದ ಕನ್ನಡ ರಾಜ್ಯೋತ್ಸವ

ಟೀಚರ್ಸ ಕಾಲೋನಿ ವೆಲ್ಫೆರ ಅಸೋಸಿಯೇಶನ್ ನಿಂದ ಕನ್ನಡ ರಾಜ್ಯೋತ್ಸವ

ಬೆಳಗಾಂವಿಯ ಟೀಚರ್ಸ ಕಾಲೋನಿ ವೆಲ್ಫೆರ ಅಸೋಸಿಯೇಶನ್ (ರಿ)
ಇವರ ವತಿಯಿಂದ ಟೀಚರ್ಸ್ ಕಾಲೋನಿ ದತ್ತಮಂದಿರದಲ್ಲಿ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿ ಕುರಿತು ಉಪನ್ಯಾಸ ನೀಡಿದ ಲೇಖಕಿ ಹಾಗೂ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಕಾರ್ಯದರ್ಶಿ ಶ್ರೀಮತಿ ಆಶಾ ಎಸ್ ಯಮಕನಮರಡಿ ಅವರು ಮಾತನಾಡುತ್ತ ಕನ್ನಡ ನಾಡು ಸಮೃದ್ಧಿಯ ಬೀಡು ಕಾವೇರಿ ಇಂದ ಗೋದಾವರಿಯ ವರೆಗೆ ಹಬ್ಬಿದ ಈ ನಾಡಿನ ನುಡಿ ಕನ್ನಡಿಗರ ಉಸಿರಿನಂತೆ.ಕನ್ನಡ ನಾಡು ನುಡಿ ಉಳಿಸಿ ಬೆಳೆಸುವಲ್ಲಿ ಕನ್ನಡಿಗರು ನಿರಂತರ ಶ್ರಮ ಪಡಬೇಕಾಗಿದೆ. ಕನ್ನಡಿಗರು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸುವುದರ ಮೂಲಕ ಮಾತೃಭಾಷೆಯನ್ನು ಮಾನವ ಜನಾಂಗ ಇರುವವರೆಗೆ ಉಳಿಸಿಕೊಂಡು ಹೋಗಬಹುದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಸಾಹಿತಿ ಶ್ರೀ ಸ ರಾ ಸುಳಕೂಡೆ ಅವರು ಕನ್ನಡ ನಾಡಿನ ಹಾಗೂ ಭಾಷೆಯ ಭವ್ಯ ಪರಂಪರೆ ಕುರಿತು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮತ್ತೋರ್ವ ಹಿರಿಯ ಸಾಹಿತಿ ಶ್ರೀ ಶಿ ಗು ಕುಸುಗಲ್ಲ ಮಾತನಾಡಿ ಕನ್ನಡ ಭಾಷೆಯ ಬಗ್ಗೆ ತಮಗಿರುವ ಅಪಾರ ಅಭಿಮಾನವನ್ನು ಕವನದ ಮೂಲಕ ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತವಹಿಸಿದ್ದ ಸಂಘಟನೆ ಅಧ್ಯಕ್ಷರು ಆದ ಶ್ರೀ ವಿ ವಿ ಹಡಗಿನಾಳ ನಿವೃತ್ತ ಮುಖ್ಯೋಪಾಧ್ಯಾಯರು ತಮ್ಮ ಈ ಸಂಘಟನೆ ಕಳೆದ ೧೫ ವರ್ಷಗಳಿಂದ ನಿರಂತರವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದೆ ಅದಕ್ಕೆ ಸಂಘಟನೆಯ ಎಲ್ಲಾ ಸದಸ್ಯರ ಸಹಾಯ ಸಹಕಾರ ನಿಮಗೆ ದೊರಕಿದೆ ಎಂದು ಹೇಳಿದರು ಜೊತೆಗೆ ತಮ್ಮ ಸ್ವರಚಿತ ಕವನವನ್ನು ವಾಚನ ಮಾಡಿದರು.

 

ಕಾರ್ಯಕ್ರಮದ ಪ್ರಾರಂಭಕ್ಕೆ ಶ್ರೀಮತಿ ಸವದಿ ಅವರು ಪ್ರಾರ್ಥನೆ ಗೀತೆ ಹಾಡಿದರು ಶ್ರೀಮತಿ ಆಶಾ ಎಸ್ ಯಮಕನಮರಡಿ ಹಚ್ಚೇವು ಕನ್ನಡದ ದೀಪ ಗೀತೆ ಪ್ರಸ್ತುತಪಡಿಸಿದರು.ವಿ ವಿ ಮಹೇಂದ್ರಕರ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತನಾಡಿದರು. ಆರ್ ಎಮ್ ಹೇರೆಕರ ವೇದಿಕೆ ಮೇಲಿನ ಗಣ್ಯರಿಗೆ ಪುಷ್ಪ ನೀಡಿ ಗೌರವಿಸಿದರು.ಶ್ರೀ ಬಿ ಜಿ ಕಡ್ಡಿ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಸವದಿ ಅವರು ವಂದನಾರ್ಪಣೆ ಮಾಡಿದರು. ಸಂಘಟನೆಯ ಇನ್ನುಳಿದ ಸದಸ್ಯರು ಕಾಲೋನಿಯ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Don`t copy text!