Blog

ಶ್ರೀ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಘ, ಮಸ್ಕಿ

ಕಲ್ಯಾಣ ಕರ್ನಾಟಕದ ಮಾದರಿ ಸಹಕಾರಿ ಸಂಘ

ಶ್ರೀ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಘ, ಮಸ್ಕಿ

 

ರಾಜ್ಯದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ನವಂಬರ 14 ರಿಂದ ಆರಂಭವಾಗಿದೆ.
ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ್ದು ಕರ್ನಾಟಕ.

120 ವರ್ಷಗಳ ಹಿಂದೆ ಗದಗ ಜಿಲ್ಲೆಯ ಕನಗಿನಹಾಳ ಗ್ರಾಮದಲ್ಲಿ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ ಸಹಕಾರ ಸಂಘ ಸ್ಥಾಪಿಸುವ ಮೂಲಕ ಸಹಕಾರ ಸಂಘಗಳ ಜನಕ ಎಂಬ ಕೀರ್ತಿ ಗೆ ಪಾತ್ರರಾಗಿದ್ದಾರೆ.

 

40 ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕದಲ್ಲಿ ಸಹಕಾರ ಕ್ಷೇತ್ರ ಹೇಳಿಕೊಳ್ಳುವಷ್ಟು ಬಲವರ್ದನೆಯಾಗಿರಲಿಲ್ಲ. ಈಗ್ಗೆ 25 ವರ್ಷಗಳಿಂದ ಸಹಕಾರ ಕ್ಷೇತ್ರ ಜನರನ್ನ ಆಕರ್ಷಿಸುವಲ್ಲಿ ಯಶಸ್ಸು ಕಂಡಿವೆ.

2000 ಮೇ 5 ಬಸವ ಜಯಂತಿಯಂದು ಮಸ್ಕಿ ನಗರದಲ್ಲಿ ಶ್ರೀ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಘ ಆರಂಭವಾಗುವ ಮೂಲಕ ಹೊಸ ಅಧ್ಯಾಯ ಬರೆಯಲು ಮುನ್ನಡೆಯಿತು.

ಆರಂಭದಲ್ಲಿ 7 ಲಕ್ಷ ರೂ. ಶೇರು ಹಣ, 400 ಜನ ಸದಸ್ಯರಿಂದ ಆರಂಭವಾದ ಈ ಸಂಸ್ಥೆ ಇಂದು ಬೆಳ್ಳಿಹಬ್ಬ ಆಚರಿಸಿಕೊಂಡು ಕಲ್ಯಾಣ ಕರ್ನಾಟಕದ ಅಗ್ರಗಣ್ಯ ಸಹಕಾರಿ ಎಂಬ ಕೀರ್ತಿಗೆ ಭಾಜನವಾಗಿದೆ.

 

 

 

 

 

 

 

 

 

 

 

(ಸಂಸ್ಥಾಪಕ ಅಧ್ಯಕ್ಷ ವೀರೇಶ ಸೌದ್ರಿ)

25 ವರ್ಷಗಳ ಸಹಕಾರಿ ಹಾದಿಯಲ್ಲಿ ಸಾಗಿದ ಈ ಸಂಸ್ಥೆಗೆ ಇಂದು 36530 ಜನ ಸದಸ್ಯರಿದ್ದಾರೆ. ಇವುರುಗಳಿಂದ 504 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು ಅದರಲ್ಲಿ 376 ಕೋಟಿ ರೂ.ಗಳನ್ನು ಸದಸ್ಯರ ಅನುಕೂಲಗಳಿಗೆ ತಕ್ಕಂತೆ ವಿವಿಧ ರೀತಿಯ ಸಾಲ ಸೌಲಭ್ಯ ನೀಡುವ ಮೂಲಕ ಸಾವಿರಾರು ಕುಟುಂಬಗಳಿಗೆ ಆಶ್ರಯ ನೀಡಿದ ಹೆಗ್ಗಳಿಕೆ ಈ ಸಂಸ್ಥೆಗೆ ಸಲ್ಲುತ್ತದೆ. ಒಟ್ಟು 880 ಕೋಟಿ ವ್ಯವಹಾರ ಮಾಡಿ, 56 ಕೋಟಿ ರೂ. ಆಪತ್ ನಿಧಿ ಕಾಪಾಡಿಕೊಂಡಿದೆ.
ಶ್ರೀಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಘ ಮಸ್ಕಿ ಪಟ್ಟಣದಲ್ಲಿ ಭೃಹತ್ ಸ್ವಂತ ನೆಲ ಮಾಳಿಗೆಯ ಜತೆಗೆ ಮೂರು ಅಂತಸ್ತಿನ ಕಟ್ಟಡ ಹೊಂದಿ ಸುಸಜ್ಜಿತ ಕಚೇರಿಯನ್ನು ಕಾರ್ಪೊರೇಟ್ ಸಿಸ್ಟಮ್ ನಲ್ಲಿ ಆರಂಭಿಸುವ ಮೂಲಕ ಇತರೆ ಸಂಸ್ಥೆಗಳಿಗೆ ಮಾದರಿ ಸಂಘವಾಗಿದೆ.

 

 

 

 

 

 

 

 

 

 

 

(ಡಾ. ಶಿವಶರಣಪ್ಪ ಇತಲಿ ಅಧ್ಯಕ್ಷರು)

ಮುಖ್ಯ ಕಚೇರಿಯ ಜತೆಗೆ ರಾಯಚೂರು, ಬಳ್ಳಾರಿ, ಕೊಪ್ಪಳ, ಕಲಬುರ್ಗಿ ಜಿಲ್ಲೆಯಲ್ಲಿ  ಮಸ್ಕಿ, ಮಸ್ಕಿ ತೇರ್ ಬಜಾರ್   ಲಿಂಗಸೂಗೂರ, ಕವಿತಾಳ, ರಾಯಚೂರ, ಸಿಂಧನೂರು, ಗಂಗಾವತಿ, ಸಿರುಗುಪ್ಪ, ಶಾಹಾಪುರ ಗಳಲ್ಲಿ ಸಹಕಾರಿ ಸಂಘದ ಅಧೀನ ಶಾಖೆಗಳನ್ನು ಆರಂಭಿಸಿ ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ವ್ಯವಹಾರ‌ ಮಾಡುವವರಿಗೆ ಸಹಕಾರ ನೀಡಿದ್ದು ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಸಾಲು ಮರುಪಾವತಿ ಮಾಡುತ್ತಿರುವುದು ಸಂಘದ ಬೆಳವಣಿಗೆಗೆ ಸಹಕಾರಿಯಾಗಿದೆ.
ಠೇವಣಿ ಮಾಡುವವರಿಗೆ ಈ ಸಹಕಾರಿ ಭದ್ರತೆ ಒದಗಿಸುವ ಮೂಲಕ ಠೇವಣಿದಾರರು ನಿಶ್ಚಿಂತವಾಗಿರಯವಂತೆ ನೋಡಿಕೊಳ್ಳುತ್ತಾರೆ.

 

 

 

 

 

 

 

 

 

 

(ಪಂಪಣ್ಣ ಗುಂಡಳ್ಳಿ ಉಪಾಧ್ಯಕ್ಷರು)

ಸಹಕಾರಿ ಸಂಘದ ಬೆಳವಣಿಗೆಯಲ್ಲಿ ಆಡಳಿತ ಮಂಡಳಿಯ ಮಾರ್ಗದರ್ಶನ, ಸಿಬ್ಬಂದಿಗಳ ನಗುಮೊಗದ ಸೇವೆ ಪ್ರಮುಖ ಕಾರಣವಾಗಿದ್ದು ನಡೆದ ಹಾದಿಗಿಂತ ನಡೆಯಬೇಕಾದ ಹಾದಿ ಸುಧೀರ್ಘ ವಾಗಿದೆ.
ಸಹಕಾರಿಯ ಪಯಣದಲ್ಲಿ ಸದಾ ಮುಂಚುಣಿಯಲ್ಲಿರುವ ಈ ಸಂಸ್ಥೆ ಇತರರಿಗೆ ಮಾದರಿಯಾಗಿದೆ.

 

 

 

 

 

 

 

 

 

 

 

(ವೀರೇಶ ಹಿರೇಮಠ ಪ್ರಧಾನ ವ್ಯವಸ್ಥಾಪಕ)

ಸಹಕಾರ ಕ್ಷೇತ್ರಕ್ಕೆ ಆಗಮಿಸುವ ಯುವ ಸಮೂಹ ಈ ಸಂಸ್ಥೆಗೆ ಭೇಟಿ ನೀಡಿ ಅಧ್ಯಯನ ಮಾಡಲು ಯೋಗ್ಯವಾಗಿದೆ.

Don`t copy text!