Blog

ಅರಿವು ಅರಿವಿನಾಚೆಗೆ ನಿಂತ ಬಯಲು

ಶರಣ ಶ್ರಾವಣಾಮೃತ :

ಅರಿವು ಅರಿವಿನಾಚೆಗೆ ನಿಂತ ಬಯಲು

 

 

 

 

 

 

 

 

 

 

 

ಈ ಜಗತ್ತು ಯಾವುದನ್ನು ಹೌದೆಂದು ಅದನ್ನು ಅತಿ ರಂಜನೀಯವಾಗಿ ಅಷ್ಟೇ ಕೌಶಲ್ಯ ಪೂರ್ಣವಾಗಿ ಸಾಮಾನ್ಯರೊಳಗೊಂಡಂತೆ ವಿದ್ವಾಂಸರ ನ್ನು ತನ್ನ ಬೌಧ್ದಿಕ ಪ್ರಭುತ್ವಶಾಹಿಯಲ್ಲಿ ಅಂತರ್ಗತವಾಗಿರಿಸಿಕೊಂಡು ಅದುವೇ ಜಗದ ಶಾಶ್ವತ ಅಂತಿಮ ಸತ್ಯವೆಂದು ಕಹಳೆ ಮೊಳಗಿಸುತ್ತೋ:
ಅದೆಲ್ಲವನ್ನು ಆತ ಸರಳವಾಗಿ ಅವರದೇ ಪರಿಭಾಷೆಯಲ್ಲಿ ಪಾರಂಪರಿಕ ನೆಲಮೂಲದ ಗ್ರಹಿಕೆಗಳ ಅನುಭವವನ್ನು ಅನುಭಾವ ವಾಗಿರಿಸಿಕೊಂಡ ಲೋಕಜ್ಞಾನವನ್ನಿಟ್ಟುಕೊಂಡೆ ಭೌದ್ಧಿಕ ಪ್ರಭುತ್ವ ಶಾಹಿಯ ದಾಸ್ಯತನಕ್ಕೆ ದಂಡಿಸುವ ದಂಡವನ್ನು ರೂಪಿಸಿದಾತ,
ಆತನು ಲೋಕಾನಭವದ ಮೂಲಕವೇ ಪರಂಪರೆಯೊಂದರ ಸಾಂಸ್ಕೃತಿಕ ಹಂದರವನ್ನು ಹದ ಮಾಡಿ ಭದ್ರ ಬೀಜಗಳನ್ನು ಬಿತ್ತಿ ಬಯಲನೇ ಆಲಯವಾಗಿರಿಸಿ ಆಲಯಗಳ ಅಲಂಕಾರ ಭ್ರಮೆಗಳನ್ನು ಛಿದ್ರಗೊಳಿಸಿದಾತ ಆತನೇ
ಎಲ್ಲರಿಗೂ ಹೌದೆಂದವರನ್ನು ಅಲ್ಲವಾಗಿರಿಸಿದ ಅಲ್ಲಮ
ಅಂತೆಯೇ ಆತನ ಅಭಿವ್ಯಕ್ತಿ ಅನುಭವ ಅನುಭಾವ ಅನುಸಂಧಾನ ಪ್ರಕ್ರಿಯೆಯಿಂದಲೇ ಸಮಕಾಲೀನ ಸಾಂಸ್ಕೃತಿಕ ವಲಯ ಪ್ರಭುವಾಗಿ ಆವಾಹಿಸಿಕೊಂಡು ಮುನ್ನಡೆಯಿತು. ಹಾಗಾಗಿ ಆತ ಎಲ್ಲರ ಬೌಧ್ದಿಕ ಸ್ತರವನ್ನು ಉನ್ನತಿಕರಿಸಿದ ಪ್ರಭುವಾದನು.

ಹೀಗೆ ಲೋಕಜ್ಞಾನದ ಮೂಲಕ ಲೋಕದ ತಳಮಳಗಳನ್ನೆಲ್ಲಾ ಅನುಭವಿಸುತ್ತಲೇಬದುಕಿನ ಪ್ರೀತಿ ಜ್ಞಾನ ಮೂಲದ ಗುರುವಿನ ವಿರಹದಲ್ಲಿಯೇ ಬಂದು ಬತ್ತಿಹೋಗಿ ಬದುಕು ಅಂತಿಮವಾಯಿತೆಂದಾಗಲೇ ಅಲೆಮಾರಿಯಾಗಿ ಜಗವ ಸುತ್ತಿ ಮಾಯಾ ಪ್ರಪಂಚದ ಮಾಯೆಗಳಿಗೆ ಮದ್ದನು ಗ್ರಹಿಸುತ್ತಾ, ಅನುಭವಿಸುತ್ತಾ, ಚಿಂತನೆ ಮಾಡುತ್ತಾ ಮುನ್ನಡಿಯಿಡುತ್ತಲೆ ಇದ್ದಾಗ ಜಗದಲಿ ಸಂಚಲನವನ್ನು ಕಂಡರಿಸಿದ, ಬಯಲ ಬೆಳಗನು, ಹರಿಯುವ ನದಿಯನು, ಸುಡುವ ಅಗ್ನಿಯನು ತಡೆಯಬಲ್ಲ-ಉಲ್ಲಂಘಿಸುವ ಧೈರ್ಯ ಶಾಲಿಗಳಿಲ್ಲದಿರುವಾಗ ಬಸವನೆಂಬ ಮಮತೆಯ ಬಳ್ಳಿ ಅಲ್ಲಮನಿಗೆ ಸುತ್ತಿಕೊಂಡು ಸುಳಿಯತೊಡಗಿದಾಗ ಸಂಚಾರಿ ಅಲ್ಲಮನ ಕ್ಷಣ ಕಾಲ ಸ್ತಬ್ಧನಾಗಿ ನಿಂತುಬಿಟ್ಟನು.

ಆತ ನಿಂತ ನೆಲೆಗೆ ಸೂಕ್ತ ಸ್ಥಾನಮಾನ ರೂಪಿಸಿ ಅನುಭವ ಮಂಟಪದ ಆಕಾರಕ್ಕೆ ಆಚ್ಛಾದನೋಪಾದಿಯಲ್ಲಿ ಅಧ್ಯಕ್ಷ ನಾಗಿ ಅಲಂಕರಿಸುವಂತೆ ಸೌಜನ್ಯ ಪೂರ್ವಕವಾಗಿ ಬಂಧಿಸಿದ ಬಸವಣ್ಣನ ಪ್ರೀತಿಗೆ ಅಲ್ಲಮ ಕರಗಿ ನೀರಾಗಿ ಮಾರ್ಪಾಡುಗೊಂಡನು. ಆ ನೀರಧಾರೆಯ ಜ್ಞಾನ ವಾರಿಧಿಯಲ್ಲಿ ಶರಣರ ದೋಣಿಗಳೆಲ್ಲಾ ಸಂಚರಿಸುತಾ ಸಮಕಾಲೀನ ಜಗವನ್ನೆಲ್ಲಾ ಬೆರಗು ಗೊಳಿಸಿ ನಿರಾಕಾರವಾದ ಜಗದ ಮೂಲ ದೇವರ ಪರಿಕಲ್ಪನೆಯನ್ನು ಹುಟ್ಟು ಹಾಕುತ್ತಲೇ ಕಂಡುಕೊಂಡನು.
ಅರಿವು ಅರಿವಿನಾಚೆಗೆ ನಿಂತ ಬಯಲು ಬಯಲೊಳಗೊಂಡ ಅಂತರ್ಗತವಾದ ಅನುಭವಿಸುವ ತೃಪ್ತಭಾವ ಯೌವನಾವಸ್ಥೆಯ ತುಮುಲಗಳನ್ನು ಬದಿಗೊತ್ತಿ ಮದ್ದಲೆಯೊಂದಿಗೆ ಮನದ ಹೊಯ್ದಾಟಗಳನ್ನು ದೂರೀಕರಿಸಿ ಸಮಯದಲ್ಲಿಯೇ ಆಕಸ್ಮಿಕ ಮೋಹದ ಸೆಳೆತಕ್ಕೆ ಸಿಲುಕಿ ಸಾಮಿಪ್ಯ ಅನುಭವಿಸುವ ಹತ್ತಿರದಲ್ಲೇ ಆ ಮೋಹ ಮಾಯವಾದ ಕ್ಷಣವೇ ಆತನಿಗೆ ಆಘಾತ ಆ ಆ ಆಘಾತದ ಆರ್ತಮೊರೆತದಲ್ಲಿಯೇ ತಳಮಳಿಸುವಾಗ ದಿಕ್ಕು ಬದಲಿಸಿದ ಅನಮಿಷನ ಅಗಲುವಿಕೆಯೂ ಆತನಿಗೆ ಮತ್ತೊಂದು ಆಘಾತ – ಈ ಎರಡು ಆಘಾತಗಳೇ ಅಲ್ಲಮನ ಬದುಕಿನಲ್ಲಿ ಎಲ್ಲವೂ ಇಲ್ಲವೆಂದು ಭಾವಿಸುತ್ತಲೇ ಲೋಕಜ್ಞಾನ ಪಡೆದುಕೊಂಡು ಮುನ್ನಡೆದಾಗ ಆಘಾತಗಳೇ ಅಂತಿಮವಲ್ಲ ವೆಂಬ ಸತ್ಯ ವನು ಅರಿತುಕೊಂಡು ಅದರಾಚೆಗೆ ಅರಿವಿನ ಆಂತರ್ಯ ಜ್ಞಾನ ತೃಷೆ ಝರಿ, ಬದುಕಿನ ಭವ್ಯತೆ, ಪ್ರೀತಿ, ಸಾಂತ್ವಾನಗಳಿವೆ ಎಂಬುದನ್ನು ಶರಣರ ಸಮೂಹದ ಸಂಲಗ್ನ ತಲೆಯಲ್ಲಿ ಕಂಡುಕೊಂಡನು

ಈ ಕಾಣುವಿಕೆ, ಕೊಳ್ಳುವಿಕೆ, ಚಿಂತಿಸುವಿಕೆಯಿಂದಾಗಿಯೇ ಅಲ್ಲಮ ಹಲವು ಶರಣರ ದೈವ ಪರಿಕಲ್ಪನೆ ಗಳನ್ನು ಅವಲೋಕಿಸಿ ತನ್ನ ದೈವ ಪರಿಕಲ್ಪನೆ ರೂಪಿಸಿಕೊಂಡನು.
ಆ ಅಲ್ಲಮನ ದೈವ ಬಯಲೊಳಗಿನ ಬಯಲು ಶಬ್ದದೊಳಗಣ ನಿಶ್ಯಬ್ದ ಹಾಗಾಗಿಯೇ ಆತನ ಪ್ರಶ್ನೆ:
ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ?
ಆರೈದು ಒಂದು ಕುಡಿತ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರಾ

 

 

 

 

 

 

 

 

 

 

 

ಡಾ. ನಾಗರಾಜ ಹೀರಾ
ಕುಷ್ಟಗಿ 9972783244

Don`t copy text!